[Kannada] - ಬೆಳ್ಳಿಮೋಡ - ತ್ರಿವೇಣಿ Bellimoda By TRIVENI: Romance Social Novel

[Kannada] - ಬೆಳ್ಳಿಮೋಡ - ತ್ರಿವೇಣಿ Bellimoda By TRIVENI: Romance Social Novel

Narrated by:
Anita.G , Sachin Nayak
A free trial credit cannot be used on this title

Unabridged Audiobook

Ratings
Book
Narrator
Release Date
March 2024
Duration
4 hours 37 minutes
Summary
ಅವಳ ನಗುವಿನೆದುರಿಗೆ ಅವನಂತೂ ಅತ್ಯಂತ ದುರ್ಬಲ. ಅವಳ ನಗುವಿನೆದುರಿಗೆ ಅವನ ನಾಲಿಗೆ ಮಾತನಾಡಲಾರದು,

ಕಣ್ಣು ಎವೆ ಪಿಳುಕಿಸಲಾರದು.

ಅವಳು ನಗುವಾಗ ಕೆಲಸ ಮಾಡಲು ಶಕ್ತವಾಗಿದ್ದುದು ಅವನ ಹೃದಯವೊಂದು ಮಾತ್ರ.

ದೇಹಕ್ಕೆ ರಕ್ತವನ್ನು ಸರಬರಾಜು ಮಾಡುವುದರ ಜೊತೆಗೆ ಹೃದಯ ಇನ್ನೂ ಕೆಲವು ಕೆಲಸಗಳನ್ನು ಮಾಡುತ್ತಿತ್ತು.

ಕಣ್ಣಿಗೆ 'ಎವೆ ಪಿಳುಕಿಸಬೇಡ' ಎಂದು ಬುದ್ಧಿ ಹೇಳುತ್ತಿತ್ತು ಹೃದಯ.

ನಾಲಗೆಯಿಂದ ಮಾತುಗಳನ್ನು ಕಳೆದುಕೊಂಡು ತನ್ನಲ್ಲೇ ಅಡಗಿಸಿಟ್ಟುಕೊಳ್ಳುತ್ತಿತ್ತು ಅವನ ಹೃದಯ.

ಅವಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ತವಕಿಸುತ್ತಿದ್ದ ಕೈಗಳಿಗೆ ಬೇಡಿ ಹಾಕಿ ಹಿಡಿದಿಡುತ್ತಿತ್ತು ಹೃದಯ.

ಅವಳ ನಗುವ ತುಟಿಗಳನ್ನು ಸ್ಪರ್ಶಿಸಬೇಡವೆಂದು ಅವನ ಹೃದಯ ಕೂಗಿ ಹೇಳುತ್ತಿತ್ತು.

ಇಷ್ಟೆಲ್ಲ ಕೆಲಸದ ಜೊತೆಗೆ ಇಡೀ ಬೆಳ್ಳಿಮೋಡವನ್ನು ವ್ಯಾಪಿಸಿ ನಿಲ್ಲುತ್ತಿತ್ತು ಅವನ ಹೃದಯ. ಮುಳ್ಳಯ್ಯನ

ಗಿರಿಯಷ್ಟೇ ಎತ್ತರವಾಗಿ ಬೆಳೆದು ನಿಲ್ಲುತ್ತಿತ್ತು ಅವನ ಹೃದಯ.

ಈ ಭಾವನೆಗಳ ಹಿಂದೆಯೇ ಪಶ್ಚಾತ್ತಾಪದ ಹುಚ್ಚು ಹೊಳೆ ಹರಿದು ಬಂದು ಎಲ್ಲವನ್ನೂ ಕೊಚ್ಚಿಕೊಂಡು

ಹೋಗುತ್ತಿತ್ತು. ಆಗ ತನಗಾಗುತ್ತಿದ್ದ ವೇದನೆ ಎಂತಹದು?

ಇಷ್ಟಾದರೂ ಅವಳನ್ನು ಮುಟ್ಟಲು ತನ್ನಿಂದ ಸಾಧ್ಯವಾಗಿಲ್ಲ. ತಾನು ಮುಳ್ಳಯ್ಯನ ಗಿರಿಯಷ್ಟು ಬೆಳೆದರೆ ಅವಳು

ಮುಗಿಲೆತ್ತರ ಬೆಳೆದು ನಿಲ್ಲುತ್ತಾಳೆ.

ತನ್ನ ಕ್ಷೇತ್ರ ಅತ್ಯಂತ ಚಿಕ್ಕದು. ತನ್ನ ಮನಸ್ಸು ಇಂದಿರೆಯನ್ನು ಮಾತ್ರ ಸುತ್ತುಗಟ್ಟಬಲ್ಲದು.

ಆದರೆ ಅವಳದೋ?

ಅದರ ಆಳ ತಿಳಿದವರಾರು?
1 book added to cart
Subtotal
$15.00
View Cart